ಅರಭಾವಿಯಲ್ಲಿ70ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಸಾಧಕರಿಗೆ ಸನ್ಮಾನ ಗೋಕಾಕ: ಸಮೀಪದ ಅರಭಾವಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘ( ಘಟಕ) ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ಯ ಸಾಧಕರಿಗೆ ಕರವೇ ಅಧ್ಯಕ್ಷ ಕೃಷ್ಣಾ ಬಂಡಿವಡ್ಡರ ಅವರ ನೇತ್ರತ್ವದಲ್ಲಿ ಸನ್ಮಾನಿಸಲಾಯಿತು.
ಕರವೇ ಅಧ್ಯಕ್ಷ ಕೃಷ್ಣಾ ಬಂಡಿವಡ್ಡರ ಕನ್ನಡ ರಾಜ್ಯೋತ್ಸವ ಧ್ಯಜಾರೋಹಣ ಮಾಡಿದರು. ನಂತರ ವಡ್ಡರ ಭೋವಿ ಸಮಾಜದ ಪೀಠಾಧಿಪತಿಗಳಾದ ಶರಣ ಬಸವ ಮಹಾಸ್ವಾಮಿಗಳ ೧೭ ನೇ ಸ್ಮರಣೋತ್ಸವ ಹಾಗೂ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಪ್ರತಿಯೊಬ್ಬರಲ್ಲಿಯೂ ಕನ್ನಡಾಭಿಮಾನ ಮೂಡಬೇಕು. ಕನ್ನಡತನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ನಾಡು,ನುಡಿಗಾಗಿ ಎಲ್ಲರೂ ಶ್ರಮಿಸಬೇಕೆಂದು ಹೇಳಿದರು. ಕಾರ್ಯಕ್ರಮದ ಸಾನಿಧ್ಯವನ್ನು ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ ತುಪ್ಪದ,ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ರೈತ ಸಂಘದ ಮುಖಂಡ ಗಣಪತಿ ಇಳಿಗೇರ, ದಲಿತ ಸಂಘದ ಮುಖಂಡ ರಮೇಶ ಮಾದರ, ಭೋವಿ ಸಮಾಜದ ಮುಖಂಡ ಸುನೀಲ ಜಮಖಂಡಿ, ಶೆಟ್ಟೆಪ್ಪ ಬಂಡಿವಡ್ಡರ, ಹಿರಿಯರಾದ ಮಾರುತಿ ಗಣಾಚಾರಿ, ಮಾಜಿ ಸೈನಿಕ ಮಾಳೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅರಭಾವಿ ಪಟ್ಟಣದ ವ್ಯಾಪ್ತಿಯ ಎಲ್ಲ ಶಾಲೆಗಳ ಶಿಕ್ಷಕರನ್ನು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಭೀಮಶಿ ಪಾತ್ರೋಟ ನಿರೂಪಿಸಿ,ವಂದಿಸಿದರು.