ಗೋಕಾಕ: ಸಮೀಪದ ಶಿಂದಿಕುರಬೇಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಪ್ರಧಾನ ಗುರುಗಳಾದ ಕಲಗೌಡ.ಟಿ.ಪಾಟೀಲ ಅವರನ್ನು ಸೇವಾ ನಿವೃತ್ತಿ ಪ್ರಯುಕ್ತ ಶಾಲೆಯ ಶಿಕ್ಷಕರು ಹಾಗೂ ಎಸ್.ಡಿ.ಎಂಸಿ ಹಾಗೂ ವಿದ್ಯಾರ್ಥಿಗಳಿಂದ ಬಿಳ್ಕೋಡುವ ಸಮಾರಂಭ ಜರುಗಿತು.
ಸಮಾರಂಭದಲ್ಲಿ ಶಿಕ್ಷಕರ ಸಂಘ ತಾಲೂಕಾಧ್ಯಕ್ಷ ಎಂ.ಜಿ.ಮಾವಿನಗಿಡದ ಮಾತನಾಡಿ ಪಾಟೀಲ ಶಿಕ್ಷಕರು ಕಳೆದ ಮೂವತ್ತು ವರ್ಷಗಳಿಂದ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಅಲ್ಲದೇ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ದಕ್ಷ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಗಳಾಗಿದ್ದು ತಮ್ಮ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಎಸ್.ಡಿಎಂಸಿ ಅಧ್ಯಕ್ಷ ಶ್ರೀಧರ ಕಂಬಾರ, ಸಿಆರ್‌ಪಿ ಸುಭಾಸ ಪಾಟೀಲ, ಎಸ್.ಸಿ/ಎಸ್.ಟಿ.ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಡಿ.ಹಂಚಿನಾಳ, ಶಿಕ್ಷಕರಾದ ಡಿ.ಜಿ.ಕಲಾರಕೊಪ್ಪ, ಶೇಖರ ಭಜಂತ್ರಿ, ಬಸವರಾಜ ಮುಗಳಿ, ಎಸ್.ಐ.ಸವದತ್ತಿ, ಸದಾಶಿವ ಭಜಂತ್ರಿ, ಬಾಗಲೆ, ಡಿ.ಕೆ.ಜಮಾದಾರ, ಗಿಣಿರಾಮ ಪತ್ರಿಕೆ ಸಂಪಾದಕ ನಾಡಗೌಡರ, ವಿಠ್ಠಲ ಕರೋಶಿ.ಎಂ.ಆರ್.ಕಡಕೋಳ ಸೇರಿದಂತೆ ಎಸ್.ಡಿಎಂಸಿ ಸದಸ್ಯರು, ವಿವಿಧ ಶಾಲೆಗಳ ಶಿಕ್ಷಕರು,ಸಿಬ್ಬಂದಿ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಜ್ಯೋತಿ ಮೇಟಿ ಸ್ವಾಗತಿಸಿ,ನಿರೂಪಿಸಿದರು. ಶಿಕ್ಷಕಿ ಪ್ರೀಯಾ ಬಂಬಲಾಡಿ ವಂದಿಸಿದರು.