ಬೆಳಗಾವಿ ಸುದ್ದಿ ಲೋಕ ಗೋಕಾಕ : ತಾಲ್ಲೂಕಿನ ಶಿಂದಿಕುರಬೇಟ ಪಂಚಾಯತ ಸದಸ್ಯರ ಮೇಲಿನ ಆರೋಪಕ್ಕೆ ಹೈಕೋರ್ಟ್ ಇಂದು ಸರ್ಕಾರದ ಆಫರ ಮುಖ್ಯ ಕಾರ್ಯದರ್ಶಿ (ಪಂ. ರಾಜ್) ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯತ ರಾಜ್ ಉಮಾ ಮಾಹಾದೇವನ ಅವರ ಆದೇಶಕ್ಕೆ ತಡೆ ನೀಡಿದೆ.
ಶಿಂದಿಕುರಬೇಟ ಗ್ರಾಮದ ಗ್ರಾಮ ಪಂಚಾಯತ್ ಆಸ್ತಿ 611ಯನ್ನು ನೆದರ ಚೂಕಿಯಿಂದ ದಾಖಲು ಮಾಡಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿದಂತೆ 26 ಸದಸ್ಯರನ್ನು ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರು ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದು ಸದ್ಯ ತಡೆ ಆದೇಶ ಹೈಕೋರ್ಟ್ ನೀಡಿದೆ.
ಘಟನೆ ಹಿನ್ನೆಲೆ: ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮ ಪಂಚಾಯತ ಆಸ್ತಿ ಸಂಖ್ಯೆ 611 ರ ಶಾಂತಾ ನಾಗಪ್ಪಾ ಪೋತದಾರ ಅವರ ಹೆಸರಿನಲ್ಲಿತ್ತು, ಈ ಆಸ್ತಿಯನ್ನು ಗ್ರಾಮ ಪಂಚಾಯತ ಸಾಮಾನ್ಯ ಸಭೆಯಲ್ಲಿ ಮಂಡಿಸಿ ರಾಮಚಂದ್ರ ದಾನಪ್ಪ ಪೋತದಾರ ಇವರಿಗೆ ನಿಯಮಬಾಹಿರವಾಗಿ ಆಸ್ತಿ ವರ್ಗಾವಣೆ ಮಾಡಿದ ಹಿನ್ನಲೆಯಲ್ಲಿ ಶಿಂಧಿಕುರಬೇಟ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸೇರಿದಂತೆ 26 ಸದಸ್ಯರನ್ನು ಅನರ್ಹಗೊಳಿಸಲಾಗಿತ್ತು, ಜೊತೆಗೆ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ನಿರ್ಬಂಧ ವಿಧಿಸಲಾಗಿತ್ತು.