ಬೆಂಗಳೂರು; ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ನನ್ನ ಹೇಳಕೆ ಕುರಿತು ಕೆಲ ಪತ್ರಿಕೆಗಳಲ್ಲಿ ಸತ್ಯಕ್ಕೆ ದೂರವಾದ ವರದಿ ಪ್ರಕಟವಾಗಿವೆ. ಸಂಜೆ ಪತ್ರಿಕೆಗಳಲ್ಲಿ ಕೆಪಿಸಿಸಿ ಹೊಸ ಅಧ್ಯಕ್ಷರಾಗಲಿ, ಸಾಹುಕಾರ ಸಮರ ಎಂದು ಪ್ರಕಟವಾಗಿವೆ. ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಯಾವ ರೀತಿ ಟೀಕೆ ಟಿಪ್ಪಣೆ ಬರುತ್ತವೆ ಗೊತ್ತಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾನು ಡಿ.ಕೆ. ಶಿವಕುಮಾರ ಬದಲಾವಣೆಗೆ ಹೇಳಿಕೆ ಕೊಟ್ಟಿಲ್ಲ. ಕೆಲ ಹೇಳಿಕೆಯಲ್ಲಿ ಸತ್ಯಾಂಶ ಇಲ್ಲ. ಮುಂದಿನ ಸಂಘಟನೆ ದೃಷ್ಟಿಯಿಂದ ಸಲಹೆ ನೀಡಿದ್ದೇವೆ. ವೇಗದ ಸ್ಥಿತಿಯಲ್ಲಿ ನಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಪಕ್ಷದ ಹೈಕಮಾಂಡ್ ಬರಬೇಕಾಗಿತ್ತು.
ಹೈಕಮಾಂಡ್ ವರಿಷ್ಠರ ಮನವೊಲಿಸಲು ನಾನು ದೆಹಲಿಗೆ ಹೋಗುತ್ತಿಲ್ಲ. ಕರ್ನಾಟಕ ಭವನದ ಕಟ್ಟಡ ಉದ್ಘಾಟನೆ ಹಿನ್ನೆಲೆಯಲ್ಲಿ ಪರಿಶೀಲನೆಗೆ ತೆರಳುತ್ತಿದ್ದೇನೆ. ಈ ರೀತಿ ಗೊಂದಲ ಆಗಿದೆ. ನಾನು ಹೇಳಿದ್ದನ್ನು ಸೀಮಿತವಾಗಿ ಬರೆದರೆ ಒಳ್ಳೆಯದು. ನಮ್ಮ ಪಕ್ಷದಲ್ಲಿ ಹಿಂದೆ ಇದ್ದಂತ ಸಂಘಟನೆ ಈಗಿಲ್ಲ ಎಂದು ಹೇಳಿದ್ದೇನೆ. ನನ್ನ ಸೇರಿದಂತೆ ನಾನು ಹೇಳಿದ್ದೇನೆ. ಹೈಕಮಾಂಡ್ ನಿರ್ಧಾರ ಎಂದು ಪದೇ ಪದೆ ಹೇಳಿದ್ದೇನೆ. ಪಕ್ಷ ಹಿತದೃಷ್ಟಿಯಿಂದ ಈ ಪ್ರಕಟಣೆಯನ್ನು ನೀಡಿದ್ದೇವೆ. ಬೇರೆ ವಿಚಾರ ಪ್ರಕಟವಾಗಿದೆ. ಪಕ್ಷದಲ್ಲಿ ಕೆಲ ಭಿನ್ನಾಭಿಪ್ರಾಯ ನಿರಂತರವಾಗಿ ಇದ್ದೇ ಇರುತ್ತೇವೆ. ನಾವು ಹೇಳಿದ್ದನ್ನು ಸೀಮಿತವಾಗಿ ಬರೆಯುವುದು ಒಳ್ಳೆಯದು. ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಗೊಂದಲ ಇರಬಾರದು ಎಂದು ಸ್ಪಷ್ಟೀಕರಣ ನೀಡಲಾಗಿದೆ ಎಂದು ತಿಳಿಸಿದ್ದಾರೆ.”