ಕಾಂಗ್ರೆಸ್ ಭವನ ಕಟ್ಟಡ ವಿವಾದ ಸಿ. ಎಲ್. ಪಿ. ಸಭೆಯಲ್ಲಿ ನನ್ನ ಹೆಸರು ಮತ್ತು ನನ್ನ ಕಾರ್ಯ ವನ್ನು ಪ್ರಸ್ತಾಪಿಸಿದ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಿದ ರಮೇಶ ಜಾರಕಿಹೊಳಿ…
ಬೆಳಗಾವಿ ಸುದ್ದಿ ಲೋಕ :ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಶಾಸಕನಾಗಿದ್ದಾಗ ಕಾಂಗ್ರೆಸ್ ಭವನ ನಿರ್ಮಾಣ ಮಾಡಲು 25 ಲಕ್ಷ ರೂ. ನೀಡಿದ್ದೆ. ಬಳಿಕ ಸಚಿವನಾದ ಮೇಲೆ 1 ಕೋಟಿ ರೂ. ಹಣ ನೀಡಿದ್ದೇನೆ. ಎಲ್ಲ ಜಿಲ್ಲೆಯ ಶಾಸಕರು 25 ಲಕ್ಷ ನೀಡಿದ್ದಾರೆ. ಆದರೆ ಹೆಬ್ಬಾಳ್ಕರ್ ಎಷ್ಟು ಹಣ ಕೊಟ್ಟಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದರು.
ಮೊನ್ನೆ ಕಾಂಗ್ರೆಸ್ ಪಕ್ಷದ ಸಿಎಲ್ಪಿ ಸಭೆ ನಡೆದಿತ್ತು. ಸನ್ಮಾನ್ಯ ಡಿಕೆ ಶಿವಕುಮಾರ್ ರಾಜ್ಯದ ಜನರಿಗೆ ತಪ್ಪು ಸಂದೇಶ ಕೊಟ್ಟಿದ್ದರು.ಈ ವೇಳೆ ಸತೀಶ್ ಜಾರಕಿಹೊಳಿ ಮಧ್ಯಪ್ರವೇಶಿಸಿ ಸ್ಪಷ್ಟನೆ ಮಾಡಿದ್ದರು. ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪ ಆಗಿದ್ದರಿಂದ ಸ್ಪಷ್ಟನೆ ಕೊಡುತ್ತಿದ್ದೇನೆ.
ನಾನು ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾಗ. ಪರಮೇಶ್ವರ್ ಅವರು ಆ ವೇಳೆ ಅಧ್ಯಕ್ಷರಾಗಿದ್ದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ಆಗಲು ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಅಂತಾ ಡಿಕೆಶಿ ಹೇಳಿದ್ದರು.
ಸತೀಶ್ ಜಾರಕಿಹೊಳಿಗೆ ವಿರೋಧ ಮಾಡುವ ಶಕ್ತಿ ಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದರು.
ಡಿಕೆ ಶಿವಕುಮಾರ್ ವಿರೋಧ ಮಾಡಿದ್ದಕ್ಕೆ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. 2013-18ರ ವರೆಗೆ ಕಾಂಗ್ರೆಸ್ ಪಕ್ಷದ ಕಚೇರಿ ಆಗಿದ್ದರ ಬಗ್ಗೆ ಹೇಳಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧ್ಯಕ್ಷೆ ಇದ್ದರೂ ಅಂದು ಕಟ್ಟಡ ನಿರ್ವಹಣೆ ಕಮಿಟಿ ಅಧ್ಯಕ್ಷರಾಗಿ ಮಹಾದೇವಪ್ಪ ಇದ್ದರು. ಆಗ ನಾನು ಶಾಸಕನಾಗಿದ್ದೆ, ಹೆಬ್ಬಾಳ್ಕರ್ ನಾವು ಒಂದು ಟೀಮ್ ಆಗಿ ಕೆಲಸ ಮಾಡುತ್ತೇವು ಎಂದರು.
ಶಂಕ್ರಾನಂದ ಅವರ ಹೆಸರಿನಲ್ಲಿ ಜಾಗ ಇದ್ದು ಅವರ ಮಕ್ಕಳಿಗೆ ಜಾಗ ನೀಡುವಂತೆ ಕನ್ವೆನ್ಸ್ ಮಾಡಿದ್ದೆ. ಆರ್ಟಿಒ ಸರ್ಕಲ್ ನಲ್ಲಿ ಜಾಗ ಬಿಟ್ಟು ಕೊಡುವಂತೆ ಕನ್ವೆನ್ಸ್ ಮಾಡಿದೆ.ಬಳಿಕ ಕ್ಯಾಬಿನೆಟ್ ಗೆ ತಂದು ಆ ಜಾಗ ಮಂಜೂರು ಮಾಡಿಸಿದೆ. ನಾನು 54 ಲಕ್ಷ ಜಾಗಕ್ಕೆ ಹಣ ನೀಡಿ ಖರೀದಿ ಪ್ರಕ್ರಿಯೆ ಮಾಡಿಸಿದ್ವಿ. ಎರಡು ಪಾರ್ಟ್ ಮೂಲಕ ಹಣವನ್ನ ಮಾಲೀಕರಿಗೆ ನೀಡಿದ್ವಿ. ನಾನೇ ಸ್ವಂತ 27ಲಕ್ಷ ಹಣವನ್ನ ಮೊದಲ ಕಂತದಲಿ ಹಣ ನೀಡಿದೆ ಎಂದರು.
ಬೆಳಗಾವಿ ಕಾಂಗ್ರೆಸ್ ಭವನ ನಿರ್ಮಾಣ ಮಾಡುವುದರಲ್ಲಿ ಸಾಕಷ್ಟು ಗೋಲ್ ಮಾಲ್ ಆಗಿದೆ. ಈ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿಗೆ ಕೇಳಿ ಹೇಳುತ್ತಾರೆ. ಕಾಂಗ್ರೆಸ್ ಭವನದ ಹಣ ಚೈನಿ ಮಾಡಿದವರು ಯಾರು ಎಂದು ಹೇಳಲಿ. ಈಗ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರನಾಗಿದ್ದೇನೆ ಎಂದರು.