- ಬೆಳಗಾವಿ ಸುದ್ದಿ ಲೋಕ ಘಟಪ್ರಭಾ: ಸಮೀಪದ ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ಸಿದ್ದಲಿಂಗೇಶ್ವರ ಜಾತ್ರೆಗೆ ಜನೇವರಿ ೧ರಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರು ಆಗಮಿಸಲಿದ್ದಾರೆ ಎಂದು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ನಿಜಗುಣ ದೇವ ಮಹಾಸ್ವಾಮಿಗಳು ತಿಳಿಸಿದರು.
ಅವರು ಬುಧವಾರದಂದು ಶ್ರೀಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ೨೭ನೇ ಸತ್ಸಂಗ ಸಂಭ್ರಮ ಮತ್ತು ಅಪ್ಪನ ಜಾತ್ರೆ ಕಾರ್ಯಕ್ರಮವು ೨೦೨೬ ಜನೇವರಿ ೧ ರಿಂದ ೩ರವರೆಗೆ ವಿಜೃಂಭನೆಯಿಂದ ಜರುಗಲಿದ್ದು, ಮೂರು ದಿನಗಳ ನಡೆಯುವ ಶ್ರೀ ಸಿದ್ದಲಿಂಗೇಶ್ವರ ಜಾತ್ರೆಗೆ ಸಚಿವರು,ಸಂಸದರು, ಶಾಸಕರು, ಗಣ್ಯ ಮಾನ್ಯರು, ಯುವ ಮುಖಂಡರು ಸೇರಿದಂತೆ ನಾಡಿನ ಹಲವಾರು ಮಹಾತ್ಮರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವರು ಎಂದು ತಿಳಿಸಿದರು.