ಗೋಕಾಕ : ತಾಲ್ಲೂಕಿನ ಶಿಂದಿಕುರಬೇಟ ಗ್ರಾಮದ ಹಜರತ ಬಾಬಾಪೀರ ಮಿಟ್ಟೆಶಾವಲಿ ಉರುಸ ಇದೆ ತಿಂಗಳು 16& 17 ಕ್ಕೆ ಜರುಗಲಿದ್ದು, ಇದರ ಪ್ರಯುಕ್ತ ಶಿಂದಿಕುರಬೇಟ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಶಾಂತಿ ಪಾಲನಾ ಸಭೆ ಜರುಗಿತು.
ಶಾಂತಿ ಪಾಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಪದಕ ಪಡೆದ ಘಟಪ್ರಭಾ ಪೊಲೀಸ ಠಾಣೆಯ ಪಿ.ಐ. ಎಚ್. ಡಿ. ಮುಲ್ಲಾ ಪ್ರತಿ ವರ್ಷದ ಪ್ರಕಾರ ತಾವುಗಳು ಅತಿ ವಿಜೃಂಭಣೆ ಇಂದ ಉರುಸ್ ಆಚರಿಸಿ ಕೊಂಡು ಬಂದಿರುತ್ತಿರಿ. ಈಗ್ಲೂ ಮಾಡಿ ಆದ್ರೆ ಅನವಶ್ಯಕವಾಗಿ ಕುಡಿದು ಗಲಾಟೆ, ಅಶ್ಲೀಲವಾಗಿ ನಡೆದುಕೊಳ್ಳುವುದು, ಶಾಂತಿ ಭಂಗಕ್ಕೆ ಯತ್ನಿಸಿದರೆ ಮುಲಾಜಿಲ್ಲದ್ದೆ ಕಾನೂನು ಕ್ರಮ ಜರುಗಿಸಬೇಕಾಗುತ್ತೆ. ಗ್ರಾಮದ ಹಿರಿಯರು ಯುವಕರಿಗೆ ಹಾಗೂ ಮನೆಗಳಲ್ಲಿ ತಮ್ಮ ಮಕ್ಕಳಿಗೆ ಹಾಗೂ ಬೇರೆ ಊರುಗಳಿಂದ ಬರುವ ತಮ್ಮ ಸಂಬಂಧಿಕರಿಗೆ ಶಾಂತಿ ಇಂದ ಉರುಸ್ ಆಚರಿಸಲು ತಿಳಿಹೇಳಬೇಕು. ಕಳೆದ ತಿಂಗಳು 5 ದಿನಗಳ ವರೆಗೆ ಯಾವ ರೀತಿ ಗ್ರಾಮದೇವತೆ ಜಾತ್ರೆ ಯನ್ನು ಶಾಂತಿ ಯಿಂದ ಯಶಸ್ವಿ ಗೊಂಡಿತೊ ಅದೇರೀತಿಯಾಗಿ ಗ್ರಾಮದ ಎಲ್ಲ ಹಿಂದೂ -ಮುಸ್ಲಿಂ ಹಿರಿಯರು ಪೊಲೀಸರೊಂದಿಗೆ ಸಹಕರಿಸಿ ಉರುಸ್ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಮತ್ತು ಮನರಂಜನೆ ಮೆರವಣಿಗೆ ನಡೆಯುವ ಪ್ರಮುಖ ಬೀದಿಗಳಲ್ಲಿ ಸಿ ಸಿ ಟಿವಿ ಕ್ಯಾಮರಾ ಗಳನ್ನು ಅಳವಡಿಸಲು ಗ್ರಾ. ಪಂ ಅಧ್ಯಕ್ಷರಿಗೆ ಸೋಚಿಸಿದರು.
ಇದೆ ಸಂಧರ್ಭದಲ್ಲಿ ಮಾತನಾಡಿದ ಪತ್ರಕರ್ತರಾದ ವಿಠ್ಠಲ ಕರೋಶಿ ಹಿಂದೂ -ಮುಸ್ಲಿಂ ಭವೈಕ್ಯತೆಯ ಸಂಕೇತವಾಗಿರು ಗ್ರಾಮದ ಹಜರತ ಬಾಬಾಪೀರ ಮಿಟ್ಟೆಶಾವಲಿ ಉರುಸ ಅತಿ ವಿಜರಂಭಣೆಯಿಂದ ಆಚರಿಸೋಣ, ಯಾವುದೆ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದೆ ಆಚರಿಸೋಣ ಅಂತ ಹೇಳಿದ ಅವರು ಘಟಪ್ರಭಾ ಪೊಲೀಸಠಾಣೆ ಯ ಪಿ. ಐ. ಎಚ್. ಡಿ. ಮುಲ್ಲಾ ಅವರು ಒಬ್ಬ ದಕ್ಷ ಮತ್ತು ಪ್ರಾಮಾಣಿಕ ಖಡಕ ಪೊಲೀಸ್ ಅಧಿಕಾರಿಯಾಗಿದ್ದು, ಅವರ ಪ್ರಾಮಾಣಿಕತೆಗೆ ಹಾಗೂ ದಕ್ಷತೆಗೆ ಮುಖ್ಯಮಂತ್ರಿ ಪದಕಕ್ಕೆ ಭಾಜನಾರಾಗಿದ್ದಾರೆ ಅವರಿಗೆ ಗ್ರಾಮದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಇದೆ ಸಂಧರ್ಭದಲ್ಲಿ ಗ್ರಾ. ಪಂ ಅಧ್ಯಕ್ಷರಾದ ಸಿದ್ದಾರೋಡ ಕಂಬಾರ, ಸೂರ್ಯವಂಶಿ,ಕುತುಬುದ್ದಿನ ತಟಗಾರ, ಪಿ. ಎಸ್. ಐ ನರಳೆ, ರಫೀಕ ಮಕಾನದಾರ, ಮಹ್ಮದಷಾ ಮಕಾನದಾರ, ದಾವಲ ದಬಾಡಿ,ಭೀಮಶಿ ಬಿರಾನಾಳಿ, ರಾಮಚಂದ್ರ ಬಂತಿ,ನಿಸಾರ್ ಜಕಾತಿ, ರಿಯಾಜ್ ಅತ್ತಾರ್, ಲಕ್ಷ್ಮಣ ಕೋಳಿ,ರಮಜಾನ್ ಅತ್ತಾರ್, ಗ್ರಾಮಸ್ತರು ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ಅಪ್ಪಾಸಾಬ ಮದಾರಶಾ ಸ್ವಾಗತಿಸಿದರು ಹಾಗೂ ಶಶಿಕಾಂತ ದಪ್ತರದಾರ ನಿರೋಪಿಸಿದರು.