ಬೆಳಗಾವಿ ಸುದ್ದಿ ಲೋಕ ಘಟಪ್ರಭಾ: -ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಪಂತ ಬಾಳೆಕುಂದ್ರಿಯಲ್ಲಿ ಸರಕಾರಿ ಬಸ್ ನಿರ್ವಾಹಕನಿಗೆ ನೀನು ಕನ್ನಡದಲ್ಲಿ ಯಾಕೆ ಮಾತನಾಡುತ್ತಿ ಅಂತ ಮರಾಠಿ ಭಾಷೆ ಮಾತನಾಡು ಅಂತ ಮರಾಠಿ ಪುಂಡರು ಮಾರ್ನಾಂತಿಕ ಹಲ್ಲೆ ಮಾಡಿ ಅವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಅವನ ಮೇಲೆ ಪೊಂಡಾಟಿಕೆ ಮೆರೆದಿದ್ದಾರೆ, ಬಸ್ ನಿರ್ವಾಹಕನಾದ ಮಾಹಾದೇವ ಹುಕ್ಕೇರಿ ಇವರ ಮೇಲೆ ಹಲ್ಲೆ ಮಾಡಿದ ಎಂ.ಇ.ಎಸ್. ಪುಂಡರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸ ಬೇಕು, ಮತ್ತು ಅವರನ್ನು ಗಡಿಪಾರು ಮಾಡಬೇಕು,ಅಮಾಯಕ ಹೆಣ್ಣು ಮಗುವನ್ನು ಬಳಸಿ ನಿರ್ವಾಹಕನ ಮೇಲೆ ಪೋಕ್ಸೋ ಕೇಸನ್ನು ದಾಖಲಿಸಿದ್ದಾರೆ.ನಿರ್ವಾಹಕನ ಮೇಲೆ ದಾಖಲಾದ ಪೋಕ್ಸು ಕೇಸನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಇಲ್ಲವಾದರೆ, ಜಿಲ್ಲಾದ್ಯಂತ, ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ಹೇಳಿದರು.
ಅವರು ಸೋಮವಾರ ಪಟ್ಟಣದ ಮೃತುಂಜಯದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಘಟಪ್ರಭಾ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಹಾಗೂ ಘಟಪ್ರಭಾ ಪುರಸಭೆಯ ಮುಖ್ಯ ಅಧಿಕಾರಿಗಳು ಹಾಗೂ ಗೋಕಾಕ್ ತಹಶೀಲ್ದಾರರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿ ಕರವೇ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ .ಕೆಂಪಣ್ಣ ಚೌಕಶಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಶಿ, ಗೋಕಾಕ್ ತಾಲೂಕ ಗೌರವಾಧ್ಯಕ್ಷರಾದ ತಮ್ಮಣ್ಣ ಅರಭಾವಿ, ಹುಕ್ಕೇರಿ ತಾಲೂಕ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಿಂಧೆ, ಗೋಕಾಕ್ ತಾಲೂಕ ಸಂಚಾಲಕರಾದ ಸಿದ್ದಪ್ಪ ತಳಗೇರಿ, ಕಾನೂನು ಸಲಹೆಗಾರರ ಎಂ ಐ ಕೋತ್ವಾಲ್, ವಕೀಲರು ಮೂಡಲಗಿ ತಾಲೂಕ ಉಪಾಧ್ಯಕ್ಷರಾದ ಶಿವರಾಜ್ ಚಿಗಡೊಳ್ಳಿ ,ಮೂಡಲಗಿ ತಾಲೂಕ ಉಸ್ತುವಾರಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಅರಭಾವಿ,ಮೂಡಲಗಿ ತಾಲೂಕ ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ಕುಡ್ಡೆಮ್ಮಿ, ಧುಪದಾಳ ಘಟಕ ಅಧ್ಯಕ್ಷರಾದ ಕಲ್ಲೋಳೆಪ್ಪ ಗಾಡಿ ವಡ್ಡರ್, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ, ನಾರಾಯಣ ಜಡಕಿನ್, ರಮೇಶ್ ಪಟಗುಂದಿ,ನಿತಿನ್ ದೇಶಪಾಂಡೆ, ಘಟಪ್ರಭಾ ಘಟಕದ ಅಧ್ಯಕ್ಷರಾದ ಯಲ್ಲಪ್ಪ ಅಟ್ಟಿಮಿಟ್ಟಿ ,ಗೋಕಾಕ್ ತಾಲೂಕ ಉಪಾಧ್ಯಕ್ಷರಾದ ಬಸವರಾಜ್ ಹುಬ್ಬಳ್ಳಿ, ಮಡ್ಯೇಪ್ಪ ರಾಜಪುರೆ, ಮಲ್ಲಿಕಾರ್ಜುನ್ ಹಳ್ಳೂರ್, ಶಿವಾನಂದ ಕಿತ್ತೂರ,ಶಾಸಪ್ಪ ರಾಜಾಪುರೆ ಹಾಗೂ ಕಾರ್ಯಕರ್ತರು ಹಾಜರಿದ್ದರು.