ಬೆಳಗಾವಿ ಸುದ್ದಿ ಲೋಕ ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 4 ವರ್ಷದ ಹೆಣ್ಣು ಮಗು ಸಮೃದ್ಧಿ ರಾಯಣ್ಣ ನಾವಿ ಸಾವನಪ್ಪಿದ ಪ್ರಕರಣದಲ್ಲಿ ಪೊಲೀಸರು ಮಲತಾಯಿಯನ್ನು ಬಂಧಿಸಿದ್ದು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಗುವನ್ನು ಕೊಲೆ ಮಾಡಿರುವ ಸತ್ಯ ಹೊರಬಂದಿದೆ.
2024ರ ಮೇನಲ್ಲಿ ಮಗು ಸಮೃದ್ದಿ ರಾಯಣ್ಣನಾವಿ ಎಂಬ ಪುಟ್ಟ ಮಗು ಸಾವನ್ನಪ್ಪಿತ್ತು. ಇದೇ ತಿಂಗಳಲ್ಲಿ ಪೊಲೀಸರು ಮೊದಲಿಗೆ ಅಸಹಜ ಸಾವು ಅಂತಾ ದಾಖಲಿಸಿಕೊಂಡ್ರು, ಜೊತೆಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೂ ಒಳಪಸಿದ್ದರು. 2024ರ ಸೆಪ್ಟೆಂಬರ್ ತಿಂಗಳಲ್ಲಿ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರುತ್ತದೆ. ಆಗ ಪೊಲೀಸರಿಗೆ ಮಲತಾಯಿಯ ಅಸಲಿ ಬಣ್ಣ ಗೊತ್ತಾಗುತ್ತದೆ. ಅಷ್ಟರೊಳಗಾಗಿ ಆರೋಪಿ ಸಪ್ನಾ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಳು. ಹೀಗಾಗಿ ಪೊಲೀಸರು ಮತ್ತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರಿಂದ ಅವಳ ಜಾಮೀನು ಅರ್ಜಿಯನ್ನ ರದ್ದು ಪಡಿಸಿತ್ತು.ಜಾಮೀನು ರದ್ದಾಗುತ್ತಿದ್ದಂತೆ ಮಲತಾಯಿ ಸಪ್ನಾಳನ್ನ ಅರೇಸ್ಟ್ ಮಾಡಿ ಹಿಂಡಲಗಾ ಜೈಲಿಗಟ್ಟಿದ್ದಾರೆ.