ಹಿಟ್ ಆ್ಯಂಡ್ ರನನಿಂದಾಗಿ ನಡೆದಿದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಹನದ ಅಪಘಾತ… !!!

ಹಿಟ್ ಆ್ಯಂಡ್ ರನ್ ಮಾಡಿದ ಕ್ಯಾಂಟರ್ ಪತ್ತೆಗಾಗಿ 2 ತಂಡ ರಚನೆ; ಎಸ್ಪಿ ಡಾ. ಭೀಮಾಶಂಕರ ಗುಳೇದ

ಬೆಳಗಾವಿ ಸುದ್ದಿ ಲೋಕ್ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣದಲ್ಲಿ ಅಪರಿಚಿತ ಕಂಟೇನರ್ ಟ್ರಕ್ ವಿರುದ್ಧ ದೂರು ದಾಖಲಿಸಲಾಗಿದೆ. ಸರ್ಕಾರಿ ಕಾರು ಡ್ರೈವರ್‌, ಹಿಟ್ & ರನ್ ಕೇಸ್ ದಾಖಲಿಸಿದ್ದಾರೆ.

ಕ್ಯಾಂಟರ್ ವಾಹನ ಮುಂದೆ ಬಂದ ನಾಯಿಗಳನ್ನು ತಪ್ಪಿಸಲು ಹೋಗಿ ಕ್ಯಾಂಟರ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. 2 ವಿಶೇಷ ತಂಡಗಳನ್ನು ರಚಿಸಿ ಹಿಟ್ ಆಂಡ್ ರನ್ ಮಾಡಿ ಪರಾರಿಯಾದ ಕ್ಯಾಂಟರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದರು.

ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು,ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ, ಗನ್ ಮ್ಯಾನ್ ಈರಪ್ಪ ಮತ್ತು ಚಾಲಕ ಶಿವಪ್ರಸಾದ ಗಂಗಾಧರಯ್ಯ ಒಟ್ಟು 4 ಜನ ಪ್ರಯಾಣಿಸುತ್ತಿದ್ದರು. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ, ಎಡಗಡೆಯಿಂದ ಕಂಟೇನರ್ ಟ್ರಕ್ ಬಲಗಡೆಗೆ ಬಂದು ಟಚ್ ನೀಡುತ್ತಿದ್ದಂತೆ ಡ್ರೈವರ್ ಶಿವಪ್ರಸಾದ ಗಂಗಾಧರಯ್ಯ ನಡೆಯುತ್ತಿದ್ದ ದೊಡ್ಡ ಅಪಘಾತವನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ, ಸರ್ವೀಸ್ ರಸ್ತೆಗಿಳಿದು ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಾಹನವನ್ನು ಪಂಚನಾಮೆ ನಡೆಸಿದಾಗ ಬಲಬದಿಗೆ ಗುದ್ದಿರುವ ನಿಶಾನೆಗಳು ಕಾಣಸಿಕ್ಕಿವೆ. ಅಲ್ಲದೇ ಶೀಘ್ರದಲ್ಲೇ ಕಾರಿಗೆ ಗುದ್ದಿರುವ ಕ್ಯಾಂಟರನ್ನು ಪತ್ತೆ ಹಚ್ಚಾಗುವುದು ಎಂದರು.

ಕಾರಿಗೆ ಗುದ್ದಿದ ಕ್ಯಾಂಟರ್ ಚಾಲಕ ಪರಾರಿಯಾಗಿದ್ದು, ಸಚಿವರ ಡ್ರೈವರ್ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸರ್ಕಾರಿ ವಾಹನವನ್ನು ಅಪಘಾತ ಸ್ಥಳದಿಂದ ಯಾವ ಕಾರಣಕ್ಕಾಗಿ ಸ್ಥಳಾಂತರಿಸಲಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು. ಹೊಸ ಕಾನೂನಿನ ಪ್ರಕಾರ ಕ್ಯಾಂಟರ್ ವಾಹನ ಅಪಘಾತಕ್ಕಿಡಾದ ವಾಹನಧಾರರಿಗೆ ನೆರವು ಒದಗಿಸಿರುವುದು ಅಪರಾಧ ಎಂದರು. ಇದೊಂದು ಹಿಟ್ ಆಂಡ್ ರನ್ ಎಂದು ಹೇಳಿದರು.

ಇನ್ನು ಘಟನೆ ನಡೆದಾಗ ಕೇವಲ ನಾಯಿ ಅಡ್ಡ ಬಂದಿದ್ದಕ್ಕೆ ಅಪಘಾತ ಸಂಭವಿಸಿರುವುದಾಗಿ ಹೇಳಲಾಗಿತ್ತು. ಈಗ ಕ್ಯಾಂಟರ್ ಗುದ್ದಿದೆ ಎಂದು ಹೇಳಲಾಗುತ್ತಿದೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಮೊದಲು ಪ್ರಾಥಮಿಕ ಮಾಹಿತಿ ಮಾತ್ರ ಸಿಕ್ಕಿತ್ತು. ನಂತರ ಎಫ್.ಐ.ಆರ್ ದಾಖಲು ಮತ್ತು ಸ್ಥಳ ಪರಿಶೀಲನೆ ಬಳಿಕ ನಾಯಿ ಅಡ್ಡ ಬಂದ ಹಿನ್ಎಲೆ ಕ್ಯಾಂಟರ್ ಎಡಕ್ಕೆ ಬಂದು ಕಾರಿಗೆ ಗುದ್ದಿರುವುದು ತಿಳಿದುಬಂದಿದೆ ಎಂದರು.

ಗನಮ್ಯಾನ್ ಈರಪ್ಪ ಹುಣಶಿಕಟ್ಟಿ ಮೊದಲು ಅರ್ಜಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಸಮಯ ಮತ್ತು ಸ್ಥಳದ ಸ್ಪಷ್ಟಿಕರಣ ಇಲ್ಲದ ಹಿನ್ನೆಲೆ, ಡ್ರೈವರ್ ದೂರು ನೀಡಿದ್ದಾರೆ. ಈಗಾಗಲೇ 2 ತಂಡಗಳನ್ನು ರಚಿಸಿ, ಕಾರಗೆ ಗುದ್ದಿ ಪರಾರಿಯಾದ ಕ್ಯಾಂಟರನ್ನು ಹುಡುಕಲಾಗುತ್ತಿದೆ ಎಂದರು. ಅಪಘಾತ ನಡೆದ ಸಮಯದಲ್ಲಿ ಸುಮಾರು 42 ಕ್ಯಾಂಟರಗಳು ಟೋಲ್ ಗೇಟನ್ನು ದಾಟಿವೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ. ದೂರಿನಲ್ಲಿ ಯಾವುದೇ ರಾಜಕೀಯ ವೈಷಮ್ಯಗಳ ಉಲ್ಲೇಖವಿಲ್ಲ. ಆದರೂ ಎಲ್ಲ ಆಯಾಮಗಳಿಂದ ತನಿಖೆಯನ್ನು ನಡೆಸಲಾಗುವುದು. ಸ್ಥಳ ಪರಿಶೀಲಿಸಿದಾಗ ಅಲ್ಲಿ ಯಾವುದೇ ಪೂರ್ವ ನಿಯೋಜನೆ ಕಂಡು ಬಂದಿಲ್ಲವೆಂದರು.

ಓವರ್‌ಟೇಕ್ ಮಾಡುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಆಯ್ತಾ ಎಂದು ಪ್ರಶ್ನೆ ಮೂಡಿದೆ. ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಿನ್ನೆ ಬೆಳಗ್ಗೆ 5 ಗಂಟೆಗೆ ಕಾರು ಅಪಘಾತ ಸಂಭವಿಸಿತ್ತು.

ದೂರಿನಲ್ಲಿ ಏನಿದೆ? ನಾನು ಸಚಿವರ ಸರ್ಕಾರಿ ಕಾರು ಏಂ01 ಉಂ977 ಚಲಾಯಿಸುತ್ತಿದ್ದೆ. ಕಾರಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, ಸಚಿವರ ಅಂಗರಕ್ಷಕ ಈರಪ್ಪ ಹುಣಶಿಕಟ್ಟಿ ಇದ್ದರು. ಬೆಂಗಳೂರಿನಿಂದ ಬೆಳಗಾವಿಗೆ ಹೊರಟ್ಟಿದ್ದೆವು. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿಯ ಧಾರವಾಡ-ಬೆಳಗಾವಿ ಮಧ್ಯದ ರಾಷ್ಟ್ರೀಯ ಹೆದ್ದಾರಿ 48ರ ಮೇಲಿದ್ದೆವು. ನಮ್ಮ ಮುಂದೆ ಲೈನ್ 1 ರಲ್ಲಿ ಹೋಗುತ್ತಿದ್ದ ಕಂಟೇನರ್ ಟ್ರಕ್ ಚಾಲಕ ಯಾವುದೇ ಮುನ್ಸೂಚನೆ ಕೊಡದೇ ಎಡಬದಿಗೆ ಬಂದ. ಆಗ ಎಡಬದಿಗೆ ತೆಗೆದುಕೊಂಡರೂ ಟ್ರಕ್ ಚಾಲಕ ಕಾರಿನ ಬಲ ಬದಿಗೆ ತಾಗಿಸಿದ.

ಕಾರು ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣ, ಗಂಭೀರ ಗಾಯಗಳಾಗಿವೆ. ಅಪಘಾತ ಮಾಡಿ ವಾಹನ ನಿಲ್ಲಿಸದೇ ಲಾರಿ ಡ್ರೈವರ್ ಹೋಗಿದ್ದಾನೆ ಎಂದು ದೂರು ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಎಲ್ಲಿಯೂ ನಾಯಿಗಳು ಅಡ್ಡ ಬಂದ ವಿಚಾರವನ್ನ ಡ್ರೈವರ್‌ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಕೇಸ್ ದಾಖಲಿಸಿ ಕಿತ್ತೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.