ಬೆಳಗಾವಿ ಸುದ್ದಿ ಲೋಕ.ಶಿವಮೊಗ್ಗ: ಇನ್ನೂ ಪ್ರಪಂಚವನ್ನೇ ನೋಡದ ನವಜಾತ ಶಿಶವನ್ನು ಕ್ರೂರ ತಾಯಿಯೊಬ್ಬಳು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಕರುಣಾಜನಕ ಘಟನೆ ನಗರದ ಶ್ರೀರಾಮಪುರದ ಬಳಿ ನಡೆದಿದೆ.

 

ಕಳೆದ ರಾತ್ರಿ ಹೆರಿಗೆಯಾಗಿರುವ ಸಾಧ್ಯತೆ ಇದೆ. ಹೆರಿಗೆಯಾದ ಬಳಿಕ ತಾಯಿಯು ಮಗುವನ್ನು ಕೈ ಚೀಲದಲ್ಲಿ ಸುತ್ತಿ ರಸ್ತೆ ಬದಿಯಲ್ಲಿ ಇಟ್ಟು ಹೋಗಿದ್ದಾರೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಂಗಾಭಾಯಿ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ಮಾಹಿತಿ ಪಡೆದುಕೊಂಡರು.